Saturday, March 6, 2010

ಜೇನು ಕೋಲು

ಜೇನು ಕೋಲು : ಬೇಕಾಗುವ ಪದಾರ್ಥಗಳು :
ದೋಸೆ ಅಕ್ಕಿ 1 ಕಪ್, ಒಂದು ಹಿಡಿ ಉದ್ದಿನ ಬೆಳೆ, ಕಾಯಿ ತುರಿ  ಒಂದು ಕಪ್, ಜೂನಿ ಬೆಲ್ಲ 2  ಕಪ್, ಒಂದು ಚಿಟಿಕೆ ಉಪ್ಪು,  ಕರಿಯಲು ಎಣ್ಣೆ.

ಮಾಡುವ ವಿಧಾನ : ಒಂದು ಅರ್ಧ ಕಪ್ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಐದು ನಿಮಿಷ ಕುದಿಸಿ ಎಲೆ ಪಾಕ ಬಂದ ಮೇಲೆ ಆರಲು ಬಿಡಿ.  ಅಕ್ಕಿ ಮತ್ತು ಉದ್ದಿನ ಬೇಳೆಯನ್ನು  ನಾಲ್ಕು ತಾಸು ನೆನೆಸಿ  ದೋಸೆ ಹಿಟ್ಟಿನ ಹದಕ್ಕೆ  ರುಬ್ಬಿಕೊಳ್ಳಿ  ಕಾಯಿ ತುರಿಗೆ ಬೆಲ್ಲ ಏಲಕ್ಕಿ ಪುಡಿ ಹಾಕಿ ಎರಡು ನಿಮಿಷ ಒಲೆಯ ಮೇಲಿಟ್ಟು ಮಗುಚಿ ಇಟ್ಟುಕೊಂಡಿರಬೇಕು. ರುಬ್ಬಿಕೊಂಡ ಹಿಟ್ಟಿನಿಂದ ಪೇಪರ್ ದೋಸೆ ಮಾಡಿ ಅದರಲ್ಲಿ ನಾಲ್ಕು ಭಾಗ ಮಾಡಿಕೊಳ್ಳಿ ತುಂಡು ಮಾಡಿದ ದೋಸೆಯಲ್ಲಿ ಕಾಯಿಸಿಟ್ಟ ಕಾಯಿ ಮಿಶ್ರಣವನ್ನು ಒಂದು ಚಮಚ ಹಾಕಿ ಸುರಳಿ ಸುತ್ತಿ ಅಂಚನ್ನು ಮಡಿಚಬೇಕು ಮಾಡಿಕೊಂಡ ಸುರಳಿಗಳನ್ನು ಬಾಣಲೆಯಲ್ಲಿ ಕಂಡು ಬಣ್ಣ ಬರುವವರೆಗೂ ಕರಿದು ಜೋನಿ ಬೆಲ್ಲದ ಪಾಕ ಅಥವಾ ಸಕ್ಕರೆ ಪಾಕದಲ್ಲಿ ಹಾಕಿಡಿ. ಅರ್ದ ತಾಸಿನ ನಂತರ ಜೇನು ಕೋಲು ಸವಿಯಲು ಸಿದ್ದ.