Thursday, October 15, 2009

ಕ್ಯಾರಟ್ ಪಾಲಕ್ ಮಸಾಲೆ ಅನ್ನ



ನಿಮಗೆ ಮೂರ್ನಾಲ್ಕು ಬಗೆಯ ಅಡಿಗೆ ಮಾಡಲು ಸಮಯವಿಲ್ಲದಾಗ, ಇಲ್ಲವೇ ಬೇರೆ ಬಗೆಯ ಊಟ ಮಾಡಬೇಕೆನ್ದೆನಿಸಿದಾಗ ಅಥವಾ ಊಟದ ಡಬ್ಬಿಗೆ ಹೊಸತೆನಾದರೂ ಬೇಕೆನಿಸಿದಾಗ ಮಾಡಬಹುದಾದ ಒಂದು ಸರಳ, ರುಚಿಕರ, ಆರೋಗ್ಯಕರ ಉಪಾಯ.

ಬೇಕಾದ ಪದಾರ್ಥಗಳು :

3 ಕಪ್ ಬಿಸಿಯಾಗಿ ಉದುರಾಗಿ ಮಾಡಿಟ್ಟುಕೊಂಡ ಅನ್ನ
1 ಈರುಳ್ಳಿ
2 ಮಧ್ಯಮ ಗಾತ್ರದ ಟೊಮೇಟೊ
2 ಕಪ್ ಹೆಚ್ಚಿದ ಪಾಲಕ್/ಸ್ಪಿನಾಚ್
2 ದೊಡ್ಡ ಕ್ಯಾರಟ್, ತುರಿದದ್ದು
2 ಚಮಚ ಜೀರಿಗೆ-ಕೊತ್ತಂಬರಿ ಪುಡಿ
2 ಚಮಚ ಮೆಣಸಿನಪುಡಿ
1/2 ಚಮಚ ಅರಿಶಿಣಪುಡಿ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಚಮಚ ಸಾಸಿವೆ
ಎಣ್ಣೆ, ಕೊತ್ತಂಬರಿ ಸೊಪ್ಪು, ಉಪ್ಪು, ಚಿಟಿಕೆ ಸಕ್ಕರೆ

ತಯಾರಿಸುವ ವಿಧಾನ :

ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ, ಸಾಸಿವೆ, ಅರಿಶಿಣ, ಜೀರಿಗೆ ಪುಡಿ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿಯನ್ನು ಉದ್ದುದ್ದಕ್ಕೆ ಹೆಚ್ಚಿ ಸೇರಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಟೊಮೇಟೊ ಹೆಚ್ಚಿ ಸೇರಿಸಿ. ಸ್ವಲ್ಪ ಉಪ್ಪು, ಸಕ್ಕರೆ, ಮೆಣಸಿನಪುಡಿ, ಗರಂ ಮಸಾಲೆ ಪುಡಿ ಸ್ವಲ್ಪ ಬೇಕಿದ್ದರೆ ಸೇರಿಸಿ ಮುಚ್ಚಿ ಬೇಯಿಸಿರಿ.

ಈ ಮಿಶ್ರಣ ಪೆಸ್ಟಿನಂತೆ ಬೆಂದಾಗ ಕ್ಯಾರಟ್, ಪಾಲಕ್ ಸೇರಿಸಿ, ಮತ್ತೆ ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿರಿ. ಈ ಮಿಶ್ರಣ ಹದವಾಗಿ ಬೆಂದಾಗ ಅನ್ನ, ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ, ಇನ್ನೆರಡು ನಿಮಿಷ ಬೇಯಿಸಿ. ತಟ್ಟೆಗೆ ಬಡಿಸಿ, ಒಂದು ಚಮಚ ತುಪ್ಪ, ಚೂರು ಲಿಂಬೆಹಣ್ಣಿನೊಂದಿಗೆ ಜಮಾಯಿಸಿ. ಜೊತೆಗೊಂದಿಷ್ಟು ಗಟ್ಟಿ ಮೊಸರಿದ್ದರೆ ಅದರ ಮಜಾನೇ ಬೇರೆ.

No comments:

Post a Comment