Wednesday, July 1, 2009
ಭಲೇ ಭಲೇ ರವೆ ಕೋಡುಬಳೆ!
ಅಕ್ಕಿಹಿಟ್ಟಿನಿಂದ ಮಾಡಿದ ಕೋಡುಬಳೆ ನಿಮಗೆ ಗೊತ್ತಿರಬಹುದು, ನೀವೂ ಮಾಡಿ ತಿಂದಿರಬಹುದು. ಅಕ್ಕಿಹಿಟ್ಟಿನ ಬದಲು ರವೆಯನ್ನುಪಯೋಗಿಸಿ ಕೋಡುಬಳೆ ಮಾಡುವ ವಿಧಾನ ಇಲ್ಲಿದೆ, ನೀವೂ ಒಮ್ಮೆ ಮಾಡಿನೋಡಿ.
ಬೇಕಾಗುವ ಸಾಮಗ್ರಿಗಳು :
2 ಲೋಟ ಸಣ್ಣರವೆ (ಚಿರೋಟಿ ರವೆ)
1/2 ಹೋಳು ಹಸಿಕಾಯಿತುರಿ
ಜೀರಿಗೆ 2 ಚಮಚ
5-6 ಎಸಳು ಬೆಳ್ಳುಳ್ಳಿ (ಇದು ಐಚ್ಛಿಕ; ಹಾಕದಿದ್ರೂ ಪರವಾಗಿಲ್ಲ)
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ ಅಥವ ಕಾರದಪುಡಿ, ಉಪ್ಪು (ರುಚಿಗೆ ತಕ್ಕಷ್ಟು)
ಬೆಣ್ಣೆ 1/4 ಕಪ್(ನಿಮ್ಮ ಡಯಟ್‌ಗೆ ಅನುಗುಣವಾಗಿ)
ಚಿಟಿಕೆ ಇಂಗು
ಕರಿಯಲು ಎಣ್ಣೆ
ಮಾಡುವ ವಿಧಾನ :
ಮಾಡಬೇಕಾಗಿರುವುದು ಇಷ್ಟೇ : ಮೊದಲು ರವೆಯನ್ನು ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ.
ಕಾಯಿತುರಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಇಂಗು ಎಲ್ಲವನ್ನೂ ನುಣ್ಣಗೆ ರುಬ್ಬಿ. (ನೀರು ಜಾಸ್ತಿ ಹಾಕಬೇಡಿ). ರುಬ್ಬಿದ ಮಿಶ್ರಣವನ್ನು ರವೆಗೆ ಹಾಕಿ. ಬೆಣ್ಣೆಯನ್ನು ಬಿಸಿಮಾಡಿ ಎಲ್ಲವನ್ನೂ ಸೇರಿಸಿ ಗಟ್ಟಿಯಾಗಿ ಕಲಸಿ. ಹಿಟ್ಟು 1 ಗಂಟೆ ನೆನೆದ ನಂತರ, ಕೋಡುಬಳೆ ಆಕಾರ ಮಾಡಿ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.
ಗರಿಗರಿಯಾಗಿ ರುಚಿರುಚಿಯಾಗಿ ನೀವು ಮಾಡಿದ ಈ ಕೋಡುಬಳೆಗಳನ್ನು ಚಹ ಕುಡಿಯುವಾಗ ಮೆಲ್ಲಲು ನಿಮ್ಮ ಯಜಮಾನ್ರೂ ಇಷ್ಟ ಪಡ್ತಾರೆ ನೋಡಿ. ಹಾಗೂ ನಿಮ್ಮ ಅಡುಗೆ ಕೌಶಲ್ಯದ ಬಗ್ಗೆ, ಕಡೇಪಕ್ಷ ಕೋಡುಬಳೆ ಎಕ್ಸ್‌ಪರ್ಟೈಸ್ ಬಗ್ಗೆ ಕೋಡು ಮೊಡಿಸಿಕೊಳ್ಳಿ
Subscribe to:
Post Comments (Atom)
No comments:
Post a Comment