Sunday, May 31, 2009

ರುಚಿರುಚಿಯಾದ ಗರಿಗರಿಯಾದ ಮೈದಾ ಬಿಸ್ಕತ್



ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಬಿಸ್ಕತ್‌ ಇದು. ನೀವೂ ರುಚಿ ನೋಡಿ! ಬೇಕರಿಯಲ್ಲಿ, ಅಲ್ಲಿ ಇಲ್ಲಿ ಕೊಳ್ಳೋದಕ್ಕಿಂತ ಮನೆಲೇ ಬೇಕಾದಷ್ಟು ಮಾಡಬಹುದು. ಹಿರಿಯರು, ಕಿರಿಯರು ಎನ್ನದೆ ಎಲ್ಲರೂ, ಯಾವುದೇ ಸಮಯದಲ್ಲಿ ತಿನ್ನಬಹುದಾದ ರುಚಿಕರ ತಿನಿಸು.

ಅಗತ್ಯವಾದ ಪದಾರ್ಥಗಳು :

ಮೈದಾ : 1 ಬಟ್ಟಲು
ರವೆ : 1/2 ಬಟ್ಟಲು
ಕೆನೆಭರಿತ ಹಾಲು/ಮೊಸರು : 1/2 ಲೋಟ
ತುಪ್ಪ/ಬೆಣ್ಣೆ : 4 ಚಮಚ
ಸಕ್ಕರೆ : 5 ಚಮಚ
ವೆನಿಲ್ಲಾ ಎಸೆನ್ಸ್‌ : ಒಂದೂವರೆ ಚಮಚ
ಬಾದಾಮಿ ಪುಡಿ(ಅರೆದು ಪುಡಿ ಮಾಡಿರುವ ಬಾದಾಮಿ) : 2 ಚಮಚ
ಅನಾನಸ್‌ ಜಾಮ್‌
ಮೊಟ್ಟೆ : 1
(ಮೊಟ್ಟೆ ಬದಲಿಗೆ ಎರಡು ಚಮಚ ಜಾಸ್ತಿ ಬೆಣ್ಣೆ ಹಾಕಬಹುದು)

ಮಾಡುವ ವಿಧಾನ :

* ಮೊದಲು ಮೈದಾ ಹಿಟ್ಟಿಗೆ ಬೆಣ್ಣೆ, ಬಾದಾಮಿ ಪುಡಿ, ಸಕ್ಕರೆ, ಎಸೆನ್ಸ್‌, ರವೆಯನ್ನು ಹಾಕಿ. ಹಾಲು/ಮೊಸರಿನಲ್ಲಿ ಗಟ್ಟಿಯಾಗಿ ಮಿಶ್ರಣವನ್ನು ಕಲಸಿ. ಮಿಶ್ರಣ ನೀರಿನಂತಿರಬಾರದು.

* ಕೇಕ್‌ ಬಾಣಲೆಯ ತಳಕ್ಕೆ ಎಣ್ಣೆ/ತುಪ್ಪ ಹಚ್ಚಿರಿ. ಮೊದಲೇ ಕಲಸಿ ಸಿದ್ಧಪಡಿಸಿರುವ ಹಿಟ್ಟನ್ನು ಕೇಕ್‌ ಬಾಣಲೆಗೆ ಹಾಕಿ, 350 ಡಿಗ್ರಿ ಶಾಖದಲ್ಲಿ ಬೇಯಿಸಿ.

* ಅನಾನಸ್‌ ಅಥವಾ ಬೇರೆ ಯಾವುದೇ ಜಾಮ್‌ ತೆಗೆದುಕೊಂಡು, ಬಾಣಲೆಯಲ್ಲಿನ ಬಿಸ್ಕತ್‌ಗಳ ಮೇಲೆ ಸವರಬೇಕು. ಬೇಕಾದ ರೀತಿಯಲ್ಲಿ ಕತ್ತರಿಸಿಕೊಂಡು ನಂತರ ಹದಿನೈದು ನಿಮಿಷ ಓವನ್‌ನಲ್ಲಿ ಬೇಯಿಸಿ. ಅದು ತಣ್ಣಗಾದ ಹತ್ತು ನಿಮಿಷದ ನಂತರ ಹೊರತೆಗೆಯಿರಿ. ಆಗ ರುಚಿರುಚಿಯಾದ ಬಿಸ್ಕತ್ ಗಳು ನಿಮ್ಮನ್ನು ಸ್ವಾಗತಿಸುತ್ತವೆ.

ನಮ್ಮ ಕಿವಿಮಾತು : ಮಕ್ಕಳಿಗೆ ದಿನಕ್ಕೊಂದು ಬಾದಾಮಿಯನ್ನು ತಿನ್ನಲು ಕೊಟ್ಟರೆ, ಅವರ ಬುದ್ಧಿಶಕ್ತಿ ಚಿಗುರುತ್ತದೆ.

ಗೋಪಿಕಾರವೀಂದ್ರ.

No comments:

Post a Comment